Saturday, March 28, 2009

ನಿರಂತರ ಯಕ್ಷಗಾನ ಮೇಳಗಳು


ಯಕ್ಷಗಾನ ಮೇಳಗಳು ಮೊದಲಿನಷ್ಟು ಇಲ್ಲದಿದ್ದರೂ ಬಹಳಷ್ಟು ಮೇಳಗಳು ಇಂದು ಚಾಲ್ತಿಯಲ್ಲಿವೇ. ವೃತ್ತಿ ಮೇಳಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಸ್ಪಷ್ಟ. ಆದರೆ ಹರಕೆ ಮೇಳಗಳೂ ಗಣನೀಯವಾಗಿ ಹರಕೆಯನ್ನು ಸಲ್ಲಿಸುತ್ತಲೆ ಇವೆ.
ಸಾಲಿಗ್ರಾಮ ಮತ್ತು ಪೆರ್ಡೂರು ಮೇಳಗಳು ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರಕನ್ನಡದಲ್ಲಿ ತಿರುಗಾಟ ಮಾಡುತ್ತಿವೆ. ಹರಕೆ ಮೇಳಗಳು ಉತ್ತರಕನ್ನಡಕ್ಕೆ ಬರುತ್ತಿಲ್ಲ. ಆದರೆ ಉತ್ತರಕನ್ನಡದ ಕರಾವಳಿ ಭಾಗದಲ್ಲಿ ಕರ್ಕಿಮೇಳ, ಕೆರೆಮನೆ ಮೇಳ ಮತ್ತು ಚಿಟ್ಟಾಣಿ ನೇತ್ರತ್ವದ ಕಾಲಮೀತಯ ಮೇಳಗಳೂ ಆಟವಾಡುತ್ತಿವೆ.
ಯಕ್ಷಗಾನ ಲೋಕದಲ್ಲಿ ಪ್ರತಿ ದಿನ ಆಟವಾಡುವ ಮೇಳಗಳ ಯಾದಿ ಒಡ್ಡೋಲಗಕ್ಕಾಗಿ. . . . . . . . . .
· ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕ್ರಪಾಪೋಷಿತ ಯಕ್ಷಗಾನ ಮಂಡಳಿ- ಧರ್ಮಸ್ಥಳ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆ ಮಾರ್ಗದರ್ಶನ ಮತ್ತು ಆಶ್ರಯದಲ್ಲಿ ನಡೆಯುತ್ತಿದೆ.
· ಶ್ರೀ ಸಾಲಿಗ್ರಾಮ ಮೇಳ, ಮಂಗಳಾದೇವಿ ಮೇಳ, ಶ್ರೀ ಸೌಕೂರು ಮೇಳ, ಶ್ರೀ ಹಾಲಾಡಿ ಮೇಳ, ಶ್ರೀ ಹಿರಿಯಡ್ಕ ಮೇಳ- ಈ ಐದು ಮೇಳಗಳೂ ಬೈಲೂರು ಪಿ. ಕಿಶನ್‌ ಹೆಗ್ಡೆ ಅವರು ನಡೆಸುತ್ತಿದ್ದಾರೆ.
· ಶ್ರೀ ಪೆರ್ಡೂರು ಮೇಳ- ಇದು ಕರಣಾಕರ ಶೆಟ್ಟಿ ಅವರ ಯಜಮಾನಿಕೆಯಲ್ಲಿ ನಡೆಯುತ್ತಿದೆ.
· ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳ ಈ ಹೆಸರಿನಡಿಯಲ್ಲಿ ನಾಲ್ಕು ಮೇಳಗಳು ನಡೆಯುತ್ತಿವೆ. ಇವು ಹರಕೆ ಬಯಲಾಟ ಮೇಳಗಳು.
· ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ನಾಲ್ಕು ಮೇಳಗಳನ್ನು ನಡೆಸುತ್ತದೆ. ಇವು ಹರಕೆ ಮೇಳಗಳು.
· ಶ್ರೀ ಹೊಸನಗರ ಮೇಳ ಶ್ರೀರಾಮಚಂದ್ರಪುರ ಮಠದ ಮೇಲ ಇದಾಗಿದ್ದು ಹೆಚ್ಚಾಗಿ ಕಾಲಮಿತಿಯ ಪ್ರಯೋಗವನ್ನು ನಡೆಸುತ್ತದೆ. ಇದು ಕೂಡಾ ಬಯಲಾಟದ ಮತ್ತು ಹರಿಕೆ ಆಟವನ್ನು ಆಡುವ ಮೇಳವಾಗಿದೆ.
· ಶ್ರೀಮಾರಣಕಟ್ಟೆ ಮೇಳ ಎರಡು ಮೇಳವನ್ನು ನಡೆಸುತ್ತಿದ್ದು, ಇದು ಹರಿಕೆ ಆಟವನ್ನು ಆಡುವ ಮೇಳವಾಗಿದೆ.
· ಗೋಳಿಗರಡಿ ಮೇಳ, ಉಳ್ಳಾಲ ಶ್ರೀ ಭಗವತಿ ಮೇಳ,ಶ್ರೀಕ್ಷೇತ್ರ ಬಗ್ವಾಡಿ ಮೇಳ, ಶ್ರೀ ಚೋನಮನೆಶನಿಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ, ಮಡಾಮಕ್ಕಿ ಮೇಳ, ಕಮಲಶಿಲೆ ಮೇಳ, ಶ್ರೀಕ್ಷೆತ್ರ ಸಿಗಂದೂರು ಮೇಳ, ಸುಂಕದಕಟ್ಟೆ ಮೇಳ, ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ ಎಡನೀರು.
· ಇದಲ್ಲದೇ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಗುಂಡಬಾಳ ದೇವಸ್ಥಾನದಲ್ಲಿ ವರ್ಷದ ಆರು ತಿಂಗಳವೂ, ಒಂದೇ ಸ್ಥಳದಲ್ಲಿ ಯಕ್ಷಗಾನ ನಡೆಯುತ್ತಿರುತ್ತದೆ.
ಇವಿಷ್ಟು ಮೇಳಗಳು ಆರು ತಿಂಗಳ ಕಾಲ ನಿರಂತರ ಯಕ್ಷಗಾನವನ್ನು ಆಡುತ್ತಿವೆ. ನೋಡುಗರ ಸಂಖ್ಯೆ ಕಡಿಮೆಯಾಗಿರಬಹುದು. ಯಕ್ಷಗಾನ ತನ್ನ ತನವನ್ನು ಕಳೆದುಕೊಳ್ಳುತ್ತಿದೆ ಎನ್ನುವುದು ತಪ್ಪು. ಇರುವ 20 ಕ್ಕೂ ಅಧಿಕ ಮೇಳಗಳಲ್ಲಿ 15ರಷ್ಟು ಮೇಳಗಳು ಪೌರಾಣಿಕ ಪ್ರಸಂಗಗಳನ್ನೇ ಆಡುತ್ತಿವೆ.
ಇದಲ್ಲದೆ ಯಕ್ಷಗಾನ ಗಾಳಿ ಇರುವ ಜಿಲ್ಲೆಗಳ ಪ್ರತಿ ತಾಲೂಕಿನಲ್ಲಿ ಎರಡರಿಂದ ಮೂರು ಹವ್ಯಾಸಿ ಮೇಳಗಳು ಆಟ ಆಡುತ್ತಲೇ ಇರುತ್ತವೆ. ಊರಿನ ಸಮಾರಾದನೆ, ಸಣ್ಣ ಜಾತ್ರೆ ಹೀಗೆ ಪೌರಾಣಿಕ ಪ್ರಸಂಗಳು ಚಾಲ್ತಿಯಲ್ಲಿವೆ.

Sunday, March 22, 2009

ಗುರು ಸಂಜೀ­ವರು


`ಉ­ಡುಪಿ' ಸಾಂಸ್ಕೃ­ತಿ­ಕ­ವಾಗಿ ಶ್ರೀಮಂ­ತ­ವಾ­ಗಿ­ರುವ ಊರು. ಇಲ್ಲಿ ಕಲೆಗೆ ಅವ­ಕಾಶ ಜಾಸ್ತಿ. ಕಲಿ­ಯು­ವು­ದಕ್ಕೂ ಅವ­ಕಾಶ ಇದೆ. ಯಕ್ಷ­ಗಾ­ನಕ್ಕೆ ಹೆಚ್ಚಿನ ಅವ­ಕಾಶ ಇಲ್ಲಿ. ಯಕ್ಷ­ಗಾನ ತರ­ಬೇತಿ ನೀಡು­ವು­ದಕ್ಕೆ ಪ್ರಥ­ಮ­ವಾಗಿ ವ್ಯಸ್ಥಿತ ರೀತಿ­ಯಲ್ಲಿ ಶಾಲೆ­ಯೊಂದು ಪ್ರಾರಂ­ಭ­ವಾ­ದದ್ದು ಇಲ್ಲಿಯೇ. ಹಿಂದ ಎಬ­ಹ­ಳಷ್ಟು ಮಂದಿ ಶ್ರೇಷ್ಠ ಗುರು­ಗಳು ಇಲ್ಲಿ ಕಾರ್ಯ ನಿರ್ವ­ಹಿ­ಸಿ­ದ್ದಾರೆ. ಸದ್ಯ­ದಲ್ಲಿ `ಬ­ನ್ನಂಜೆ ಸಂಜೀವ ಸುವರ್ಣ' ಇಲ್ಲಿ ನೃತ್ಯ­ಗುರು.
ಯಕ್ಕ­ಗಾ­ನದ ನೃತ್ಯದ ಬಗ್ಗೆ ಇವ­ರಷ್ಟು ಶಾಸ್ತ್ರೀ­ಯ­ವಾಗಿ ಪ್ರಯೋಗ ಮಾಡಿ­ದ­ವರು ಯಾರು ಇರ­ಲಿ­ಕ್ಕಿಲ್ಲ. ಗುರು ಸಂಜೀ­ವರು ಉಡು­ಪಿಗೆ ತಾಗಿ ಕೊಂಡಿ­ರುವ ಬನ್ನಂ­ಜೆ­ಯಲ್ಲಿ ಹುಟ್ಟಿ­ದ­ವರು. ನೆಲದ ಪ್ರಭಾ­ವ­ವಿ­ರ­ಬೇಕು. ಚಿಕ್ಕಂ­ದಿ­ನಿಂ­ದಲೇ ಯಕ್ಷ­ಗಾ­ನದ ಆಸಕ್ತಿ. ಬಡ­ತ­ನದ ಅನಿ­ವಾ­ರ್ಯತೆ ಗ್ಯಾರಜ್‌ ಕೆಲ­ಸಕ್ಕೆ ಹೋಗು­ವಂತೆ ಮಾಡಿತು. ಆದರೆ ಯಕ್ಷ­ಗಾ­ನದ ಚಟ ಇವ­ರನ್ನು ರಾತ್ರಿ ಸಮ­ಯ­ದಲ್ಲಿ ಹೋಗಿ ಯಕ್ಷ­ಗಾ­ನ­ವನ್ನು ಕಲಿ­ಯು­ವಂತೆ ಮಾಡಿತು.
ಯಕ್ಷ­ಗಾ­ನ­ವನ್ನು ಕಲಿತ ಮೇಲೆ ಎಲ್ಲ­ರಂತೆ ಇವರು ಮೇಳ ಸೇರಿ­ದರು. ಅನು­ಭವ ಸಾಲದು ಎನ್ನುವ ಮನೋ­ಭಾವ ಬಂತೋ. ಅಥವಾ ಇವ­ರಿ­ಗಿ­ರುವ ಕ್ರಿಯೇ­ಟಿ­ವಿಟಿ ಅಲ್ಲಿ­ರಲು ಕೊಡ­ಲಿ­ಲ್ಲ­ವೇನೋ?. ಮತ್ತೆ ಗುರು­ಗ­ಳನ್ನು ಅರಸಿ ಹೊರ­ಟರು. ಮುರ್ಗೋಳಿ ಗೋವಿಂದ ಶೇರು­ಗಾರ, ವೀರ­ಭದ್ರ ನಾಯಕ ಮುಂತಾದ ಹದಿ­ನಾ­ರಕ್ಕೂ ಹೆಚ್ಚು ಕಲಾ­ವಿ­ದ­ರಲ್ಲಿ ವಿವಿಧ ನಮೂ­ನೆಯ ನೃತ್ಯ­ವನ್ನು ಅಭ್ಯಾಸ ಮಾಡಿ­ದರು. ನಂತರ ಯಕ್ಷ­ಗಾನ ಕೇಂದ್ರ­ದಲ್ಲಿ ಗುರು­ಗ­ಳಾಗಿ ತಾವು ಕಲಿತ ಕಲೆ­ಯನ್ನು ಜಿಪಿ­ಣ­ತ­ನ­ವಿ­ಲ್ಲದೇ ಕಲಿಸ ತೊಡ­ಗಿ­ದರು.
ಗುರು­ಗಳು ಮಹಾ ಸ್ಟ್ರಿಕ್ಟ್‌. ಕುಣಿತ ಮಾಡು­ವಾಗ ತಾಳ್ಮೆ­ಯಿಂದ ಹೇಳಿ ಕೊಡು­ತ್ತಾರೆ. ಹತ್ತು ಬಾರಿ ಹೇಳಿ­ಕೊ­ಟ್ಟರೂ ಬರ­ದಿ­ದ್ದರೆ, ಅವರ ಕೈಲ್ಲಿ­ರುವ ಬಿಲ್ಲು ಮಾತ­ನಾ­ಡು­ತ್ತದೆ. ಪೆಟ್ಟು ಗ್ಯಾರಂಟಿ. ಒಮ್ಮೆ ಇವರ ಹತ್ತಿರ ಕಲಿ­ತರೆ ಕುಣಿತ ಮತ್ತೆ ಮರೆ­ಯು­ದಿಲ್ಲ.
ಕಾರಂ­ತರ ಒಡ­ನಾ­ಡಿ­ಗ­ಳಾಗಿ ಅವರ ರೂಪ­ಕ­ಗ­ಳಿಗೆ ರೂಪ­ವನ್ನು ನೀಡಿದ ಅನು­ಭವ ಇವ­ರದ್ದು. ಉತ್ತಮ ನಿರ್ದೇ­ಶಕ ಇವರು. ಹಲ­ವಾರು ಯಕ್ಷ­ಗಾನ ಪ್ರಸಂ­ಗ­ಗ­ಳನ್ನು ಹೊಸ ಕಲ್ಪ­ನೆ­ಯಲ್ಲಿ ನಿರ್ದೇ­ಶಿಸಿ ಯಶ­ಸ್ವಿ­ಯಾಗಿ ಪ್ರದ­ರ್ಶನ ಗೊಂಡಿದೆ.
ಗುರು­ಗಳ ಶಿಷ್ಯಂ­ದಿರ ಬಳ­ಗ­ದಲ್ಲಿ ವಕೀ­ಲರು. ವೈದ್ಯರು, ವಿದೇ­ಶೀ­ಯರು ಎಲ್ಲರು ಇದ್ದಾರೆ. ಯಕ್ಷ­ಗಾ­ನ­ವನ್ನು ಆರಾ­ದನೆ ಎಂದು ತಿಳಿ­ರುವ ಸಂಜೀವ ಗುರು­ಗ­ಳಿಗೆ ಅವರ ಅಸಂ­ಖ್ಯಾತ ಶಿಷ್ಯಂ­ದಿ­ರಲ್ಲಿ ಒಬ್ಬ­ನಾದ ನನ್ನ ನುಡಿ ನಮನ.

Thursday, March 12, 2009

`ಗಜ ಮುಖದವಗೆ ಗಣಪತಿಗೆ' ಮೊದಲ ನಮನ.

`ಯ­ಕ್ಷ­ಗಾನ' ಎನ್ನುವ ಶಬ್ದವೇ ಕೇಳಿ­ದಾಗ ಒಮ್ಮೆಲೆ ಉತ್ಸಾಹ ನನಗೆ ಬರು­ತ್ತದೆ. ಸಣ್ಣ­ವ­ನಿ­ರು­ವಾ­ಗಿ­ನಿಂದ ಯಕ್ಷ­ಗಾನ ಅಂದರೆ ಏನೋ ಖುಷಿ. ಮುಖಕ್ಕೆ ಮಸಿ­ಕೆಂಡ( ಇದ್ದಿಲು) ಹಚ್ಚಿ­ಕೊಂಡು ಕುಣಿ­ದಿದ್ದೆ ಕುಣಿ­ದಿದ್ದು. ಊರ ಸುತ್ತ­ಲಿನ ಯಾವ ಬೆಟ್ಟ­ಗು­ಡ್ಡ­ವನ್ನು ಬಿಡ­ಲಿಲ್ಲ. ಯಾರ ಮನೆಯ ಹಿತ್ತಿ­ಲನ್ನು ಬಿಡ­ಲಿಲ್ಲ. ನಾಲ್ಕು ಗೋಣಿ ಪಾಟು ಕಟ್ಟಿ ರಂಗ­ಸ್ತಳ ಮಾಡಿ ಯಕ್ಷ­ಗಾ­ನ­ವನ್ನು ಕುಣಿದು ದಣಿ­ದಿ­ದ್ದೇವು. ಚಿಟ್ಟಾಣಿ, ಜಳ­ವಳ್ಳಿ, ಮಹಾ­ಬಲ ಹೆಗಡೆ ಮುಂತಾದ ಕಲಾ­ವಿ­ದರು ನಮಗೆ ರೋಲ್‌ ಮಾಡೆಲ್‌. ಅಪ­ರೂ­ಪಕ್ಕೆ ಅವರ ಆಟ ನೋಡಿ, ಅವ­ರನ್ನೇ ಅನು­ಕ­ರಣೆ ಮಾಡುವ ಚಟ­ವನ್ನು ಬೆಳೆ­ಸಿ­ಕೊಂ­ಡಿ­ದ್ದೇವು.
ನಾನು ಸರಿ­ಯಾಗಿ ಆಟ ಕುಣಿ­ಯಲು ಕಲಿ­ತದ್ದು, ಉಡು­ಪಿಯ ಯಕ್ಷ­ಗಾನ ಕೇಂದ್ರ­ದಲ್ಲಿ. ಗುರು ಸಂಜೀ­ವರು ಗುರು­ಗಳು. ಕ್ಷಮೆ ಇರಲಿ ಸರಿ­ಯಾಗಿ ಕುಣಿ­ಯಲು ಅನ್ನು­ವು­ದ­ಕ್ಕಿಂತ ಯಕ್ಷ­ಗಾ­ನ­ವನ್ನು ತಿಳಿ­ಯಲು ಕಲಿ­ತದ್ದು ಎನ್ನ­ಬ­ಹುದು.
ಹುಟ್ಟು ಯಕ್ಷ­ಗಾ­ನದ ಚಟ­ವನ್ನು ಬೆಳೆ­ಸಿ­ಕೊಂಡ ನಾನು ಇದರ ಬಗ್ಗೆ ಬರೆ­ಯುವ ರೂಢಿ­ಯನ್ನು ಮಾಡಿ­ಕೊಂ­ಡಿ­ದ್ದೇನೆ. ಇಲ್ಲಿನ ವಿಚಾ­ರ­ಗ­ಳನ್ನು ತುಂಬ­ಲಿಕ್ಕೆ ಪ್ರಾರಂ­ಭಿ­ಸಿ­ರು­ವುದೇ `ಒ­ಡ್ಡೋ­ಲಗ' ಬ್ಲಾಗ್‌. ನನ್ನ ಗುರು­ಗ­ಳಾದ ಮತ್ತು ನನ್ನಂತ ಅನೇ­ಕ­ರಿಗೆ ಗುರು­ಗ­ಳಾದ ಗುರು ಬನ್ನಂಜೆ ಸಂಜೀವ ಸುವ­ರ್ಣರ ಬಗ್ಗೆ ಬರೆದು ಗುರು­ವಿಗೆ ಅಕ್ಷರ ಕಾಣಿ­ಕೆ­ಯನ್ನು ಮೊದಲ ಹೆಜ್ಜೆ­ಯನ್ನು ಇಡು­ತ್ತೇನೆ.

Followers

FEEDJIT Live Traffic Feed