Sunday, March 22, 2009

ಗುರು ಸಂಜೀ­ವರು


`ಉ­ಡುಪಿ' ಸಾಂಸ್ಕೃ­ತಿ­ಕ­ವಾಗಿ ಶ್ರೀಮಂ­ತ­ವಾ­ಗಿ­ರುವ ಊರು. ಇಲ್ಲಿ ಕಲೆಗೆ ಅವ­ಕಾಶ ಜಾಸ್ತಿ. ಕಲಿ­ಯು­ವು­ದಕ್ಕೂ ಅವ­ಕಾಶ ಇದೆ. ಯಕ್ಷ­ಗಾ­ನಕ್ಕೆ ಹೆಚ್ಚಿನ ಅವ­ಕಾಶ ಇಲ್ಲಿ. ಯಕ್ಷ­ಗಾನ ತರ­ಬೇತಿ ನೀಡು­ವು­ದಕ್ಕೆ ಪ್ರಥ­ಮ­ವಾಗಿ ವ್ಯಸ್ಥಿತ ರೀತಿ­ಯಲ್ಲಿ ಶಾಲೆ­ಯೊಂದು ಪ್ರಾರಂ­ಭ­ವಾ­ದದ್ದು ಇಲ್ಲಿಯೇ. ಹಿಂದ ಎಬ­ಹ­ಳಷ್ಟು ಮಂದಿ ಶ್ರೇಷ್ಠ ಗುರು­ಗಳು ಇಲ್ಲಿ ಕಾರ್ಯ ನಿರ್ವ­ಹಿ­ಸಿ­ದ್ದಾರೆ. ಸದ್ಯ­ದಲ್ಲಿ `ಬ­ನ್ನಂಜೆ ಸಂಜೀವ ಸುವರ್ಣ' ಇಲ್ಲಿ ನೃತ್ಯ­ಗುರು.
ಯಕ್ಕ­ಗಾ­ನದ ನೃತ್ಯದ ಬಗ್ಗೆ ಇವ­ರಷ್ಟು ಶಾಸ್ತ್ರೀ­ಯ­ವಾಗಿ ಪ್ರಯೋಗ ಮಾಡಿ­ದ­ವರು ಯಾರು ಇರ­ಲಿ­ಕ್ಕಿಲ್ಲ. ಗುರು ಸಂಜೀ­ವರು ಉಡು­ಪಿಗೆ ತಾಗಿ ಕೊಂಡಿ­ರುವ ಬನ್ನಂ­ಜೆ­ಯಲ್ಲಿ ಹುಟ್ಟಿ­ದ­ವರು. ನೆಲದ ಪ್ರಭಾ­ವ­ವಿ­ರ­ಬೇಕು. ಚಿಕ್ಕಂ­ದಿ­ನಿಂ­ದಲೇ ಯಕ್ಷ­ಗಾ­ನದ ಆಸಕ್ತಿ. ಬಡ­ತ­ನದ ಅನಿ­ವಾ­ರ್ಯತೆ ಗ್ಯಾರಜ್‌ ಕೆಲ­ಸಕ್ಕೆ ಹೋಗು­ವಂತೆ ಮಾಡಿತು. ಆದರೆ ಯಕ್ಷ­ಗಾ­ನದ ಚಟ ಇವ­ರನ್ನು ರಾತ್ರಿ ಸಮ­ಯ­ದಲ್ಲಿ ಹೋಗಿ ಯಕ್ಷ­ಗಾ­ನ­ವನ್ನು ಕಲಿ­ಯು­ವಂತೆ ಮಾಡಿತು.
ಯಕ್ಷ­ಗಾ­ನ­ವನ್ನು ಕಲಿತ ಮೇಲೆ ಎಲ್ಲ­ರಂತೆ ಇವರು ಮೇಳ ಸೇರಿ­ದರು. ಅನು­ಭವ ಸಾಲದು ಎನ್ನುವ ಮನೋ­ಭಾವ ಬಂತೋ. ಅಥವಾ ಇವ­ರಿ­ಗಿ­ರುವ ಕ್ರಿಯೇ­ಟಿ­ವಿಟಿ ಅಲ್ಲಿ­ರಲು ಕೊಡ­ಲಿ­ಲ್ಲ­ವೇನೋ?. ಮತ್ತೆ ಗುರು­ಗ­ಳನ್ನು ಅರಸಿ ಹೊರ­ಟರು. ಮುರ್ಗೋಳಿ ಗೋವಿಂದ ಶೇರು­ಗಾರ, ವೀರ­ಭದ್ರ ನಾಯಕ ಮುಂತಾದ ಹದಿ­ನಾ­ರಕ್ಕೂ ಹೆಚ್ಚು ಕಲಾ­ವಿ­ದ­ರಲ್ಲಿ ವಿವಿಧ ನಮೂ­ನೆಯ ನೃತ್ಯ­ವನ್ನು ಅಭ್ಯಾಸ ಮಾಡಿ­ದರು. ನಂತರ ಯಕ್ಷ­ಗಾನ ಕೇಂದ್ರ­ದಲ್ಲಿ ಗುರು­ಗ­ಳಾಗಿ ತಾವು ಕಲಿತ ಕಲೆ­ಯನ್ನು ಜಿಪಿ­ಣ­ತ­ನ­ವಿ­ಲ್ಲದೇ ಕಲಿಸ ತೊಡ­ಗಿ­ದರು.
ಗುರು­ಗಳು ಮಹಾ ಸ್ಟ್ರಿಕ್ಟ್‌. ಕುಣಿತ ಮಾಡು­ವಾಗ ತಾಳ್ಮೆ­ಯಿಂದ ಹೇಳಿ ಕೊಡು­ತ್ತಾರೆ. ಹತ್ತು ಬಾರಿ ಹೇಳಿ­ಕೊ­ಟ್ಟರೂ ಬರ­ದಿ­ದ್ದರೆ, ಅವರ ಕೈಲ್ಲಿ­ರುವ ಬಿಲ್ಲು ಮಾತ­ನಾ­ಡು­ತ್ತದೆ. ಪೆಟ್ಟು ಗ್ಯಾರಂಟಿ. ಒಮ್ಮೆ ಇವರ ಹತ್ತಿರ ಕಲಿ­ತರೆ ಕುಣಿತ ಮತ್ತೆ ಮರೆ­ಯು­ದಿಲ್ಲ.
ಕಾರಂ­ತರ ಒಡ­ನಾ­ಡಿ­ಗ­ಳಾಗಿ ಅವರ ರೂಪ­ಕ­ಗ­ಳಿಗೆ ರೂಪ­ವನ್ನು ನೀಡಿದ ಅನು­ಭವ ಇವ­ರದ್ದು. ಉತ್ತಮ ನಿರ್ದೇ­ಶಕ ಇವರು. ಹಲ­ವಾರು ಯಕ್ಷ­ಗಾನ ಪ್ರಸಂ­ಗ­ಗ­ಳನ್ನು ಹೊಸ ಕಲ್ಪ­ನೆ­ಯಲ್ಲಿ ನಿರ್ದೇ­ಶಿಸಿ ಯಶ­ಸ್ವಿ­ಯಾಗಿ ಪ್ರದ­ರ್ಶನ ಗೊಂಡಿದೆ.
ಗುರು­ಗಳ ಶಿಷ್ಯಂ­ದಿರ ಬಳ­ಗ­ದಲ್ಲಿ ವಕೀ­ಲರು. ವೈದ್ಯರು, ವಿದೇ­ಶೀ­ಯರು ಎಲ್ಲರು ಇದ್ದಾರೆ. ಯಕ್ಷ­ಗಾ­ನ­ವನ್ನು ಆರಾ­ದನೆ ಎಂದು ತಿಳಿ­ರುವ ಸಂಜೀವ ಗುರು­ಗ­ಳಿಗೆ ಅವರ ಅಸಂ­ಖ್ಯಾತ ಶಿಷ್ಯಂ­ದಿ­ರಲ್ಲಿ ಒಬ್ಬ­ನಾದ ನನ್ನ ನುಡಿ ನಮನ.

2 comments:

  1. This comment has been removed by the author.

    ReplyDelete
  2. A welcome addition to the world of blogs. I think this is the first blog in Kannada to focus exclusively on Yakshagana although there are a couple of other blogs which write on Yakshagana alongside other topics. Hope to seeing a lot in this blog with regular updates.

    ReplyDelete

Followers

FEEDJIT Live Traffic Feed