ಸುಬ್ರಮಣ್ಯ ಧಾರೇಶ್ವರ
ಯಕ್ಷಗಾನದ ಜನಪ್ರಿಯ ಭಾಗವತ
ನಾನು ಗೋಕರ್ಣದ ಸಮುದ್ರದ ಅಂಚಿನಲ್ಲಿ ಹುಟ್ಟಿದವ. ನನ್ನ ಅಪ್ಪ ಲಕ್ಷ್ಮೀನಾರಾಯಣ ಭಟ್ಟ, ಅಮ್ಮ ಲಕ್ಷ್ಮೀ. ನಾನು ಒಬ್ಬನೇ ಮಗ. ಚಿಕ್ಕಂದಿನಿಂದಲೂ ನಾನು ಕಾಣುತ್ತಿರುವ ಕನಸು ಒಂದೇ, ಹಿಂದೂಸ್ತಾನಿ ಸಂಗೀತಗಾರನಾಗಬೇಕು ಎಂಬುದು.
ನನ್ನ ಚಿಕ್ಕಮ್ಮ ಸುಲೋಚನಾ ಮಧ್ಯಸ್ಥ ಮತ್ತು ಮಾವ ನಾರಾಯಣ ಮಧ್ಯಸ್ಥ ಸಂಗೀತದ ಗುಂಗನ್ನು ಮೊದಲು ನನಗೆ ತುಂಬಿದವರು. `ಶರಣು ಸಿದ್ಧಿವಿನಾಯಕ' ಮತ್ತು ಭೀಮಸೇನ ಜೋಶಿ ಅವರ `ಮಾದೆ ಮಾಹೆರ ಪಂಡರಿ' ಈ ಪದ್ಯಗಳು ನನಗೆ ಒಂದು ರೀತಿಯ ಹುಚ್ಚನ್ನೇ ಹಿಡಿಸಿದ್ದವು ಎಂದರೆ ತಪ್ಪಾಗಲಾರದು.
ಒಮ್ಮೆ ಗೋಕರ್ಣಕ್ಕೆ ಶ್ಯಾಮಲಾ ಭಾವೆ ಅವರು ಬಂದಾಗ ಅವರ ಹಿಂದೆಯೇ ಹೊರಟವನು ನಾನು. ಅದು ಮನೆಯವರಿಗೆ ಗೊತ್ತಾಗಿ ಹೋಗಲು ಬಿಡಲಿಲ್ಲ. `ಒಬ್ಬನೇ ಮಗ ಸಂಗೀತ ಕಲಿತರೆ ಕೈಗೆ ಸಿಗಲಾರ' ಎಂಬ ಕಾರಣದಿಂದಲೋ ಎನೋ?..
ನನ್ನ ವಿದ್ಯಾಭ್ಯಾಸವು ಪ್ರಥಮ ಪಿಯುಸಿಗೆ ಮುಕ್ತಾಯಗೊಂಡಿತು. ಆಮೇಲೆ ಹೊಟ್ಟೆಪಾಡು. ಎಲೆಕ್ಟ್ರಿಕ್ ಕೆಲಸ ಕಲಿತೆ. ಕರೆಂಟ್ ವಾಯರಿಂಗ್ ಮಾಡುವುದು ನನ್ನ ಉದ್ಯೋಗವಾಯಿತು. ಆವಾಗ ಅಪರೂಪವಾದ ಮೈಕ್ ಸೆಟ್ ಇಟ್ಟು ನಾಟಕ, ಸಂಗೀತ ಕಾರ್ಯಕ್ರಮಗಳಿಗೆ ನೀಡತೊಡಗಿದೆ. ಜೀವನ ಪೂರ್ತಿ ಲೈಟ್ ಕಂಬ ಹತ್ತುವುದರಲ್ಲಿಯೇ ಕಳೆಯುತ್ತದೆ ಎಂದುಕೊಂಡಿದ್ದೆ. ಆದರೆ ಹಾಗಾಗಲಿಲ್ಲ. ಯಕ್ಷಗಾನದ ಭಾಗವತನಾದೆ. ನಾನು ಭಾಗವತ ಆಗಿರುವುದು ಒಂದು ಆಕಸ್ಮಿಕ.
ಯಕ್ಷಗಾನದ ಮೇರು ಭಾಗವತ ಉಪ್ಪೂರು ನಾರಾಯಣ ಭಾಗವತರು ಹಾಗೂ ಸಣ್ಣ ವಯಸ್ಸಿನಲ್ಲೇ ಯಾರೂ ಮರೆಯದ ಹೆಸರನ್ನು ಮಾಡಿ ನೆನಪಾಗಿಯೇ ಉಳಿದ ದಿ. ಕಾಳಿಂಗ ನಾವುಡರು ಗೋಕರ್ಣಕ್ಕೆ ಬಂದಿದ್ದರು. ನನ್ನ ತಂದೆಗೂ ಅವರಿಗೂ ಒಳ್ಳೆಯ ಸ್ನೇಹವಿತ್ತು. ಉಪ್ಪೂರರ ಹತ್ತಿರ ನನ್ನನ್ನು ತೋರಿಸಿ ಇವನನ್ನು ದಾರಿಗೆ ತರುವ ಕೆಲಸ ನಿಮ್ಮದು ಎಂದು ಒಪ್ಪಿಸಿಬಿಟ್ಟರು. ನಾನು ದಾರಿ ತಪ್ಪಿರಲಿಲ್ಲ ಅದು ಬೇರೆ ಮಾತು. ಅವರು ಹೇಳಿದ್ದು ನನ್ನ ಮೇಲಿನ ಕಾಳಜಿಯಿಂದ ಎನ್ನುವುದು ಸ್ಪಷ್ಟ.
ಸಂಗೀತಗಾರನಾಗಬೇಕೆಂದಿದ್ದ ನಾನು ಯಕ್ಷಗಾನದ ಭಾಗವತನಾಗಬೇಕಾದ ಸ್ಥಿತಿ ಬಂತು. ಮೊದಲನೆಯದಾಗಿ ನನಗೆ ಯಕ್ಷಗಾನವೆಂದರೆ ಅಷ್ಟಕಷ್ಟೇ. ಅಂದರೆ ಗದಾಯುದ್ಧ ಪ್ರಸಂಗವೆಂದರೆ ಗದೆಯಲ್ಲಿ ಹೊಡೆದುಕೊಳ್ಳುವುದು ಎನ್ನುವ ಕಲ್ಪನೆ ನನ್ನದು. ಆದರೆ ಎಂದು ಉಪ್ಪೂರರ ಗರಡಿಗೆ ಸೇರಿದೆನೋ ಅಂದಿನಿಂದ ನನ್ನ ಗತಿ ಬದಲಾಯಿತು. ಕನಸು ಮಾತ್ರ ಹಾಗೆಯೇ ಉಳಿಯಿತು.
ದಿ. ಕಾಳಿಂಗ ನಾವುಡ, ಚಿಟ್ಟಾಣಿ ರಾಮಚಂದ್ರ ಹೆಗಡೆ, ದಿ. ದುರ್ಗಪ್ಪ ಗುಡಿಗಾರರು ನನಗೆ ಉತ್ತಮ ಅವಕಾಶಗಳನ್ನು ನೀಡುತ್ತ ನನ್ನ ಬೆಳವಣಿಗೆಗೆ ಕಾರಣರಾದರು. ವಿಭಿನ್ನತೆಯನ್ನು ಬಯಸುವ ಮನಸ್ಸು ನನ್ನದು. ಹಾಗಾಗಿ ನಾನು ಆಡಿಸುವ ಪ್ರಸಂಗಗಳಲ್ಲಿ ಹೊಸ ಹೊಸ ಪ್ರಯೋಗಕಾಣುವುದು ಸಹಜ. ಅದು ಯಶಸ್ಸನ್ನು ಕಂಡಿತು. ಸಂಗೀತಗಾರನಾಗುವ ಕನಸನ್ನು ಇಟ್ಟುಕೊಂಡು ಯಕ್ಷಗಾನದಲ್ಲೂ ಸಂಗೀತದ ರುಚಿಯನ್ನು ಕಾಣತೊಡಗಿದೆ. ಹೃದಯಕ್ಕೆ ಹತ್ತಿರವಿರುವ ಪೌರಾಣಿಕ ಪ್ರಸಂಗಗಳು ಅನಿವಾರ್ಯವಾಗಿ ಕಡಿಮೆ ಆಗುತ್ತ ಬಂದವು. ಜನ ಬಯಸುವ ಪ್ರಸಂಗಗಳನ್ನು ನೀಡಬೇಕಾದ ಸ್ಥಿತಿ ನಿರ್ಮಾಣವಾಯಿತು. ಸಾಮಾಜಿಕ ಪ್ರಸಂಗಗಳು ಕಿಸೆಗೆ ಹತ್ತಿರವಾಯಿತು. ನಾನು ಮಾಡಿದ ಪ್ರಯೋಗಗಳನ್ನು ಜನ ಒಪ್ಪಿಕೊಂಡರು. ವಿಮರ್ಶಕರ ಪಾಲಿಗೆ ಸಹ್ಯವಾಗಲಿಲ್ಲ ಎನ್ನಬಹುದು. ನಾನು ಯಕ್ಷಗಾನದಲ್ಲಿ ಒಂದು ಹಂತಕ್ಕೆ ಬೆಳೆದಿದ್ದೇನೆ. ಆದರೆ ನನ್ನ ಕನಸು ನನಸಾಗದ ಕನಸಾಗಿಯೇ ಉಳಿಯತ್ತದೆಯೇ ಎನ್ನುವ ಭಯವು ಪ್ರಾರಂಭವಾಯಿತು.
ಜೀವನಕ್ಕೊಸ್ಕರ ಕರೆಂಟ್ ಕೆಲಸ ಮಾಡಲು ಪ್ರಾರಂಭಿಸಿದೆ. ಆಕಸ್ಮಿಕವಾಗಿಯೇ ಯಕ್ಷಗಾನ ರಂಗಕ್ಕೆ ಬಂದೆ. ಹೀಗೆ ಬಂದ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿರುವ ತೃಪ್ತಿಯಿದೆ. ಸಂಗೀತಗಾರನಾಗುವ ಕನಸನ್ನು ಕನಸಾಗಿ ಉಳಿಸಿಕೊಳ್ಳಬಾರದು ಅದನ್ನು ಸಾಕಾರ ಮಾಡಿಕೊಳ್ಳಬೇಕೆಂಬ ಹಠ ನನ್ನಲ್ಲಿ ಇತ್ತು, ಈಗಲೂ ಇದೆ.
ಸಂಗೀತಗಾರನಾಗುವುದೇನೋ ಸರಿ, ಕಲಿಯುವುದು ಯಾರ ಹತ್ತಿರ ? ಎಂಬುದು ಸಮಸ್ಯೆಯಾಯಿತು. ಕಳೆದ ವರ್ಷ ಶ್ಯಾಮಲಾ ಭಾವೆ ಅವರ ಶಿಷ್ಯನಾಗಿ ಸಂಗೀತ ಕಲಿಯಲು ಪ್ರಾರಂಭಿಸಿದ್ದೇನೆ. ಈಗ ಮತ್ತೊಮ್ಮೆ ನನ್ನ ಕನಸಿಗೆ ರೆಕ್ಕೆಗಳು ಬಂದಿವೆ. ಜನ ಮೆಚ್ಚುವ ಹಿಂದೂಸ್ತಾನಿ ಸಂಗೀತಗಾರನಾಗುತ್ತೇನೋ ಬಿಡುತ್ತೇನೋ ಗೊತ್ತಿಲ್ಲ. ಕನಸು ಪೂರ್ಣ ನನಸಾಗದಿದ್ದರೂ ಆಸೆ ಈಡೇರಬಹುದೆನೋ ಎಂದು ಅನ್ನಿಸುತ್ತದೆ..
ನಿರೂಪಣೆ: ನಾಗರಾಜ ಮತ್ತಿಗಾರ