Saturday, March 28, 2009

ನಿರಂತರ ಯಕ್ಷಗಾನ ಮೇಳಗಳು


ಯಕ್ಷಗಾನ ಮೇಳಗಳು ಮೊದಲಿನಷ್ಟು ಇಲ್ಲದಿದ್ದರೂ ಬಹಳಷ್ಟು ಮೇಳಗಳು ಇಂದು ಚಾಲ್ತಿಯಲ್ಲಿವೇ. ವೃತ್ತಿ ಮೇಳಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಸ್ಪಷ್ಟ. ಆದರೆ ಹರಕೆ ಮೇಳಗಳೂ ಗಣನೀಯವಾಗಿ ಹರಕೆಯನ್ನು ಸಲ್ಲಿಸುತ್ತಲೆ ಇವೆ.
ಸಾಲಿಗ್ರಾಮ ಮತ್ತು ಪೆರ್ಡೂರು ಮೇಳಗಳು ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರಕನ್ನಡದಲ್ಲಿ ತಿರುಗಾಟ ಮಾಡುತ್ತಿವೆ. ಹರಕೆ ಮೇಳಗಳು ಉತ್ತರಕನ್ನಡಕ್ಕೆ ಬರುತ್ತಿಲ್ಲ. ಆದರೆ ಉತ್ತರಕನ್ನಡದ ಕರಾವಳಿ ಭಾಗದಲ್ಲಿ ಕರ್ಕಿಮೇಳ, ಕೆರೆಮನೆ ಮೇಳ ಮತ್ತು ಚಿಟ್ಟಾಣಿ ನೇತ್ರತ್ವದ ಕಾಲಮೀತಯ ಮೇಳಗಳೂ ಆಟವಾಡುತ್ತಿವೆ.
ಯಕ್ಷಗಾನ ಲೋಕದಲ್ಲಿ ಪ್ರತಿ ದಿನ ಆಟವಾಡುವ ಮೇಳಗಳ ಯಾದಿ ಒಡ್ಡೋಲಗಕ್ಕಾಗಿ. . . . . . . . . .
· ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕ್ರಪಾಪೋಷಿತ ಯಕ್ಷಗಾನ ಮಂಡಳಿ- ಧರ್ಮಸ್ಥಳ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆ ಮಾರ್ಗದರ್ಶನ ಮತ್ತು ಆಶ್ರಯದಲ್ಲಿ ನಡೆಯುತ್ತಿದೆ.
· ಶ್ರೀ ಸಾಲಿಗ್ರಾಮ ಮೇಳ, ಮಂಗಳಾದೇವಿ ಮೇಳ, ಶ್ರೀ ಸೌಕೂರು ಮೇಳ, ಶ್ರೀ ಹಾಲಾಡಿ ಮೇಳ, ಶ್ರೀ ಹಿರಿಯಡ್ಕ ಮೇಳ- ಈ ಐದು ಮೇಳಗಳೂ ಬೈಲೂರು ಪಿ. ಕಿಶನ್‌ ಹೆಗ್ಡೆ ಅವರು ನಡೆಸುತ್ತಿದ್ದಾರೆ.
· ಶ್ರೀ ಪೆರ್ಡೂರು ಮೇಳ- ಇದು ಕರಣಾಕರ ಶೆಟ್ಟಿ ಅವರ ಯಜಮಾನಿಕೆಯಲ್ಲಿ ನಡೆಯುತ್ತಿದೆ.
· ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳ ಈ ಹೆಸರಿನಡಿಯಲ್ಲಿ ನಾಲ್ಕು ಮೇಳಗಳು ನಡೆಯುತ್ತಿವೆ. ಇವು ಹರಕೆ ಬಯಲಾಟ ಮೇಳಗಳು.
· ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ನಾಲ್ಕು ಮೇಳಗಳನ್ನು ನಡೆಸುತ್ತದೆ. ಇವು ಹರಕೆ ಮೇಳಗಳು.
· ಶ್ರೀ ಹೊಸನಗರ ಮೇಳ ಶ್ರೀರಾಮಚಂದ್ರಪುರ ಮಠದ ಮೇಲ ಇದಾಗಿದ್ದು ಹೆಚ್ಚಾಗಿ ಕಾಲಮಿತಿಯ ಪ್ರಯೋಗವನ್ನು ನಡೆಸುತ್ತದೆ. ಇದು ಕೂಡಾ ಬಯಲಾಟದ ಮತ್ತು ಹರಿಕೆ ಆಟವನ್ನು ಆಡುವ ಮೇಳವಾಗಿದೆ.
· ಶ್ರೀಮಾರಣಕಟ್ಟೆ ಮೇಳ ಎರಡು ಮೇಳವನ್ನು ನಡೆಸುತ್ತಿದ್ದು, ಇದು ಹರಿಕೆ ಆಟವನ್ನು ಆಡುವ ಮೇಳವಾಗಿದೆ.
· ಗೋಳಿಗರಡಿ ಮೇಳ, ಉಳ್ಳಾಲ ಶ್ರೀ ಭಗವತಿ ಮೇಳ,ಶ್ರೀಕ್ಷೇತ್ರ ಬಗ್ವಾಡಿ ಮೇಳ, ಶ್ರೀ ಚೋನಮನೆಶನಿಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ, ಮಡಾಮಕ್ಕಿ ಮೇಳ, ಕಮಲಶಿಲೆ ಮೇಳ, ಶ್ರೀಕ್ಷೆತ್ರ ಸಿಗಂದೂರು ಮೇಳ, ಸುಂಕದಕಟ್ಟೆ ಮೇಳ, ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ ಎಡನೀರು.
· ಇದಲ್ಲದೇ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಗುಂಡಬಾಳ ದೇವಸ್ಥಾನದಲ್ಲಿ ವರ್ಷದ ಆರು ತಿಂಗಳವೂ, ಒಂದೇ ಸ್ಥಳದಲ್ಲಿ ಯಕ್ಷಗಾನ ನಡೆಯುತ್ತಿರುತ್ತದೆ.
ಇವಿಷ್ಟು ಮೇಳಗಳು ಆರು ತಿಂಗಳ ಕಾಲ ನಿರಂತರ ಯಕ್ಷಗಾನವನ್ನು ಆಡುತ್ತಿವೆ. ನೋಡುಗರ ಸಂಖ್ಯೆ ಕಡಿಮೆಯಾಗಿರಬಹುದು. ಯಕ್ಷಗಾನ ತನ್ನ ತನವನ್ನು ಕಳೆದುಕೊಳ್ಳುತ್ತಿದೆ ಎನ್ನುವುದು ತಪ್ಪು. ಇರುವ 20 ಕ್ಕೂ ಅಧಿಕ ಮೇಳಗಳಲ್ಲಿ 15ರಷ್ಟು ಮೇಳಗಳು ಪೌರಾಣಿಕ ಪ್ರಸಂಗಗಳನ್ನೇ ಆಡುತ್ತಿವೆ.
ಇದಲ್ಲದೆ ಯಕ್ಷಗಾನ ಗಾಳಿ ಇರುವ ಜಿಲ್ಲೆಗಳ ಪ್ರತಿ ತಾಲೂಕಿನಲ್ಲಿ ಎರಡರಿಂದ ಮೂರು ಹವ್ಯಾಸಿ ಮೇಳಗಳು ಆಟ ಆಡುತ್ತಲೇ ಇರುತ್ತವೆ. ಊರಿನ ಸಮಾರಾದನೆ, ಸಣ್ಣ ಜಾತ್ರೆ ಹೀಗೆ ಪೌರಾಣಿಕ ಪ್ರಸಂಗಳು ಚಾಲ್ತಿಯಲ್ಲಿವೆ.

2 comments:

  1. yakshagana yeno chenagi mudi bartha ide adare yakshagadali kelasamaduva ellara hesarukuda pracatamdauvudilla ellara hesaranu helabeku

    ReplyDelete

Followers

FEEDJIT Live Traffic Feed